ಅಯ್ಯನಾರ್
	ಶಾತ್ತಾ ಎಂದು ನಾಮಾಂತರ. ದಾರುಕಾ ವನದ ಋಷಿಗಳ ಅಹಂಕಾರವನ್ನಡಗಿಸುವುದಕ್ಕಾಗಿ ಹರಿಹರರು ಅಲ್ಲಿಗೆ ಬಂದಾಗ ಮೋಹಿನೀ ರೂಪವನ್ನು ತಳೆದ ವಿಷ್ಣುವನ್ನು ಮೋಹಿಸಿದ ಈಶ್ವರನಿಂದ ಮೋಹಿನಿಯಲ್ಲಿ ಹುಟ್ಟಿದವ. ಗ್ರಾಮಸಂರಕ್ಷಣೆಗಾಗಿ ಗ್ರಾಮದ ಉತ್ತರ ದಿಕ್ಕಿನಲ್ಲಿ ದೇವಾಲಯದಲ್ಲಿ ಪ್ರತಿಷ್ಠಿತ. ತಮಿಳುನಾಡಿನ ಪುರುಷದೇವತೆಗಳಲ್ಲಿ ಪ್ರಸಿದ್ಧ. ಮಳೆಗೋಸ್ಕರ ಈತನ ಪೂಜೆ ಮತ್ತು ಉಪಾಸನೆ ಮಾಡುವುದುಂಟು.					     					
 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ